ಎಳ್ಳು ತಂದಿದ್ದೇನೆ ಬೀರಲು
ಜೊತೆಗೆ ಮೂವತ್ತೆರಡು ಹಲ್ಲು
ಸೆನ್ಸೊಡೈನ್ ಸೆಲ್ಫೀ ನಗು.
ಯಾವುದೋ ಎಲಚಿ
ತಳ್ಳುಗಾಡಿಯಲ್ಲಿ ಕೊಂಡಿದ್ದೇನೆ
ಮರವೇರದೆ ತರಚು ಗಾಯವಿಲ್ಲದೆ
ತಂದಿದ್ದೇನೆ ಎಲಚಿ ತಗೊಳ್ಳಿ
ಎಳ್ಳು ತಂದಿದ್ದೇನೆ ಬೀರಲು......
ನಾನು ಬೆಳೆಯದ ಕಡಲೆ
ಹದವಾಗಿ ಹುರಿದ ಶೇಂಗಾ
ಅರೆಜೀವದ ಕಿತ್ತಳೆ
ಬೆಡಗಿನ ನಗೆ ಇಗೊಳ್ಳಿ
ಎಳ್ಳು ತಂದಿದ್ದೇನೆ ಬೀರಲು......
ಬೇಗ ಹಣ್ಣಾಗಿಸಲು
ದ್ರಾವಕದಲ್ಲಿ ಅದ್ದಿದ ಬಾಳೆ
ಯಾರದೋ ಹದ ಪಾಕ
ಗಂಧಕ ಬಣ್ಣ ಬೆರೆತ ಅಚ್ಚು
ಎಳ್ಳು ತಂದಿದ್ದೇನೆ ಬೀರಲು.....
ಕಾಲು ಕೆಸರಾಗಿಸದೆ
ಫುಟ್ಪಾತಿನಲಿ ಕತ್ತರಿಸಿದ ಕಬ್ಬು
ಒಣಗುವ ಮುನ್ನವೇ ತಿನ್ನಿ
ಉಳಿದರೆ ಉರಿಸಲು ಒಲೆಯಿಲ್ಲ
ಎಳ್ಳು ತಂದಿದ್ದೇನೆ ಬೀರಲು.....
ಸುಗ್ಗಿ ಹಬ್ಬದ ಸಂಕ್ರಾಂತಿ
ಬೆಳೆವ ರೈತನ ಅರೆದ ಬೆಲ್ಲ
ಕಬ್ಬಿಗೆ ಬಿಗಿದ ನೇಣು
ಎಳ್ಳಿನೊಂದಿಗೆ ಬಿಡಿ ಕಣ್ಣೀರು
ಹಾದಿ ತಪ್ಪಿದ ಪ್ರಗತಿಗೆ
ದಿಕ್ಕು ಬದಲಿಸಿದ ಸೂರ್ಯನಿಗೆ
ಎಳ್ಳು ತಂದಿದ್ದೇನೆ ಬೀರಲು.....
ಜೊತೆಗೆ ಮೂವತ್ತೆರಡು ಹಲ್ಲು
ಸೆನ್ಸೊಡೈನ್ ಸೆಲ್ಫೀ ನಗು.
ಯಾವುದೋ ಎಲಚಿ
ತಳ್ಳುಗಾಡಿಯಲ್ಲಿ ಕೊಂಡಿದ್ದೇನೆ
ಮರವೇರದೆ ತರಚು ಗಾಯವಿಲ್ಲದೆ
ತಂದಿದ್ದೇನೆ ಎಲಚಿ ತಗೊಳ್ಳಿ
ಎಳ್ಳು ತಂದಿದ್ದೇನೆ ಬೀರಲು......
ನಾನು ಬೆಳೆಯದ ಕಡಲೆ
ಹದವಾಗಿ ಹುರಿದ ಶೇಂಗಾ
ಅರೆಜೀವದ ಕಿತ್ತಳೆ
ಬೆಡಗಿನ ನಗೆ ಇಗೊಳ್ಳಿ
ಎಳ್ಳು ತಂದಿದ್ದೇನೆ ಬೀರಲು......
ಬೇಗ ಹಣ್ಣಾಗಿಸಲು
ದ್ರಾವಕದಲ್ಲಿ ಅದ್ದಿದ ಬಾಳೆ
ಯಾರದೋ ಹದ ಪಾಕ
ಗಂಧಕ ಬಣ್ಣ ಬೆರೆತ ಅಚ್ಚು
ಎಳ್ಳು ತಂದಿದ್ದೇನೆ ಬೀರಲು.....
ಕಾಲು ಕೆಸರಾಗಿಸದೆ
ಫುಟ್ಪಾತಿನಲಿ ಕತ್ತರಿಸಿದ ಕಬ್ಬು
ಒಣಗುವ ಮುನ್ನವೇ ತಿನ್ನಿ
ಉಳಿದರೆ ಉರಿಸಲು ಒಲೆಯಿಲ್ಲ
ಎಳ್ಳು ತಂದಿದ್ದೇನೆ ಬೀರಲು.....
ಸುಗ್ಗಿ ಹಬ್ಬದ ಸಂಕ್ರಾಂತಿ
ಬೆಳೆವ ರೈತನ ಅರೆದ ಬೆಲ್ಲ
ಕಬ್ಬಿಗೆ ಬಿಗಿದ ನೇಣು
ಎಳ್ಳಿನೊಂದಿಗೆ ಬಿಡಿ ಕಣ್ಣೀರು
ಹಾದಿ ತಪ್ಪಿದ ಪ್ರಗತಿಗೆ
ದಿಕ್ಕು ಬದಲಿಸಿದ ಸೂರ್ಯನಿಗೆ
ಎಳ್ಳು ತಂದಿದ್ದೇನೆ ಬೀರಲು.....
No comments:
Post a Comment