ನೀನು-ನಾನು
ನೀನು
ಮುಂಗೈ ಮೇಲಣ ಹಚ್ಚೆಯಲ್ಲ
ಬೆನ್ನ ಮೇಲಣ ಮಚ್ಚೆ
ಮರೆಯಲ್ಲಿಯೂ
ಸದಾ ಜಾಗೃತ
ಕೈಕೇಯಿ ವರದಂತೆ
ಸುಯೋಧನನ ತೊಡೆಯಂತೆ.
ನಾನು
ಮುಂಗಾಲ ಗೆಜ್ಜೆಯಲ್ಲ
ಮನದ ತೋರಣದ ಲಜ್ಜೆ
ವ್ಯಕ್ತದಲ್ಲಿಯೂ
ಸದಾ ಅವ್ಯಕ್ತ
ರಾಮನ ವನವಾಸದಂತೆ
ದ್ರೌಪದಿಯ ಶ್ರೀಮುಡಿಯಂತೆ.
ನೀನು-ನಾನು ಬದುಕಿನ, ಅಸ್ತಿತ್ವದ ಎರಡು ತುದಿಯ ಪ್ರಜ್ಞಾಬಿಂದುಗಳು. ಅವೆರಡು ಸಾಪೇಕ್ಷವೂ(ರೆಲೆಟಿವ್) ಹೌದು.
ನೀನು ಎಂಬ ಭಾವ ನನ್ನೊಳಗೆ ಮರೆಯಾಗಿದ್ದರೂ ಸದಾ ಜಾಗೃತವಾಗಿರುತ್ತದೆ. ಹಚ್ಚೆ ಮುಂಗೈ ಅಥವಾ ದೇಹದ ಮೇಲಿನ ಭಾಗಗಳಲ್ಲಿದ್ದು ಅದನ್ನು ಹಾಕಿಸಿಕೊಳ್ಳುವ ಉದ್ದೇಶವೇ ಅದನ್ನು ಪರರು ನೋಡಲಿ ಎಂದು. ಆದರೆ ಮಚ್ಚೆ ಚಿಕ್ಕದು, ಅದು ಎಲ್ಲಿದೆ ಎಂದು ಆ ವ್ಯಕ್ತಿಗೆ ಮಾತ್ರ ಗೊತ್ತಿರುವಂತಹದ್ದು. ನೀನೆಂಬ ಭಾವ- ಅದು ಪ್ರೇಮಿಯ ವಿರಹವೂ ಆಗಬಹುದು ಅಥವಾ ಭಕ್ತನ ಆರಾಧನಾಭಾವವೂ ಆಗಬಹುದು, ಈ ಬಗೆಯ ಸುಪ್ತವಾದ ಆದರೆ ಸದಾ ಜಾಗೃತ ಪ್ರಜ್ಞೆ.
ನಾನು ಎಂಬುದು ತನ್ನಿರವನ್ನು ಇದ್ದೂ ತೋರದಂತಿರುವ ಕೇಂದ್ರ. ಗೆಜ್ಜೆ ಹೇಗೆ ತನ್ನ ನಾದದಿಂದ ವ್ಯಕ್ತಿಯ ರೂಪವನ್ನು ಕಣ್ಮುಂದೆ ತರುತ್ತದೋ ಹಾಗೆ ಮನದ ಬಾಗಿಲಿನ ತೋರಣದಂತಿರುವ ನಾನೆಂಬ ಭಾವ ಗುಪ್ತವಾದರೂ ಇಡೀ ಬದುಕಿನ ಅಸ್ತಿಭಾರವೇ ಆಗಿರುತ್ತದೆ. ನಾನೆಂಬ ಭಾವ - ಅದು ಮಿತದ ಅಹಂ(ಪ್ರೇಮಿಯ ನಾನು) ಆದರೂ ಆಗಬಹುದು ಅಥವಾ ಅಹಂ ಬ್ರಹ್ಮಾಸ್ಮಿ ಎಂಬ ಆತ್ಮಜ್ಞಾನವೂ ಆಗಬಹುದು, ಏನೇ ಆದರೂ ಅದು ವ್ಯಕ್ತದಲ್ಲಿ ಅವ್ಯಕ್ತವೇ ಆಗಿರುವ ಅನುಭವ!
ನೀನೆಂಬ ಭಾವಕ್ಕೆ ಕೈಕೇಯಿಯ ವರ ಮತ್ತು ಸುಯೋಧನನ ತೊಡೆಯನ್ನು ಉಪಮೆಯಾಗಿ ಬಳಸಲಾಗಿದೆ. ಇಲ್ಲಿ ಮತ್ತೊಂದು ಜಾಣ್ಮೆಯಿದೆ. ‘ಕೈಕೇಯಿ ವರ’ ಎನ್ನುವಾಗ ಅದು ಕೈಕೇಯಿಗೆ ದಶರಥನಿತ್ತ ವರವೂ ಆಗಬಹುದು ಅಥವಾ ಕೈಕೇಯಿ ಬೇಡಿದ ವರವೂ ಆಗಬಹುದು. ‘ಸುಯೋಧನನ ತೊಡೆಯೂ’ ಅಷ್ಟೆ. ಅದು ತುಂಬಿದ ಸಭೆಯಲ್ಲಿ ವಸ್ತ್ರ ಸರಿಸಿ ಪ್ರದರ್ಶಿಸಿ ತಟ್ಟಿ ಕುಳ್ಳಿರೆಂದು ದ್ರೌಪದಿಯನ್ನು ಆಹ್ವಾನಿಸಿದ ತೊಡೆಯೂ ಆಗಬಹುದು ಹಾಗೆಯೇ ಭೀಮನ ಗದಾಪ್ರಹಾರದಿಂದ ಜರ್ಝರಿತವಾದ ತೊಡೆಯೂ ಆಗಬಹುದು.
ನಾನು ಎಂಬುದಕ್ಕೂ ಮತ್ತೆ ಸಂವಾದಿಯಾದ ಉಪಮೆಗಳನ್ನು ಬಳಸಲಾಗಿದೆ. ರಾಮನ ವನವಾಸ ಅಂದರೆ ರಾಮನು ಪಟ್ಟ ಕಷ್ಟಗಳು ಎಂದು ಒಂದರ್ಥ, ಅವನು ನಡೆಸಿದ ವನವಾಸ ಎಂದು ಇನ್ನೊಂದರ್ಥ. ದ್ರೌಪದಿಯ ಶ್ರೀಮುಡಿಯೂ ಅಷ್ಟೆ. ಅದು ಅವಳ ಮುಡಿ ಎಂದು ಹಾಗೆಯೇ ಅದು ಸದಾ ಪಾಂಡವರ ಜವಾಬ್ದಾರಿಯನ್ನು ನೆನಪಿಸುವ ಸಂಕೇತವೆಂದೂ ಅರ್ಥ.
ನಾನು- ನೀನುಗಳ ಸಂಬಂಧವನ್ನೂ ಈ ಉಪಮೆಗಳು ಚಿತ್ರಿಸುತ್ತವೆ. ರಾಮಾಯಣ-ಮಹಾಭಾರತದ ಈ ಉಪಮೆಗಳೇ ಪದ್ಯದ ಜೀವಾಳ. ಕೈಕೇಯಿಯ ವರ ರಾಮನ ವನವಾಸಕ್ಕೆ ನಾಂದಿ, ರಾಕ್ಷಸರ ನಾಶಕ್ಕೆ ಬುನಾದಿ. ಸುಯೋಧನನ ತೊಡೆಯು ದ್ರೌಪದಿಯ ರೋಷಕ್ಕೆ ಮಹಾಭಾರತ ಯುದ್ಧಕ್ಕೆ ಕಾರಣ. ಲಜ್ಜಾವತಿಯಾದ ದ್ರೌಪದಿಯ ಶಾಪ ವ್ಯಕ್ತ, ಅದರ ಪರಿಣಾಮ ಘನಗುಪ್ತ. ಕೈಕೇಯಿ ವರ ಗುಪ್ತ ಆದರೆ ಪರಿಣಾಮ ಸುವ್ಯಕ್ತ! ಹೀಗೆ ನೀನು-ನಾನುಗಳ ಏರಿಳಿತಗಳ ಸಾಲು ಬದುಕು.

No comments:
Post a Comment